Sri Vyasatirtha Vidyapeeta
Jnanameva param padam
श्री व्यासतीर्थ विद्यापीठम्
ज्ञानमेव परम पदम्
ಶ್ರೀಮದಾಚಾರ್ಯರ ಸತ್ಸಿದ್ಧಾಂತದ ಆಳವಾದ ಜ್ಞಾನವನ್ನು ಪಡೆದಿರತಕ್ಕಂತಹ ವಿದ್ವಾಂಸರನ್ನು ನಿರ್ಮಾಣ ಮಾಡತಕ್ಕ ಒಂದು ಕಾರ್ಯ ಈ ಮಠದ ಕರ್ತವ್ಯವಾಗಿದೆ , ಶ್ರೀಮದಾಚಾರ್ಯರ ಪರಂಪರೆಯಲ್ಲಿ ಬಂದಿರ್ತಕ್ಕಂತ ಅನೇಕ ಮಠಗಳು ಈ ಕೆಲಸವನ್ನು ಮಾಡುತ್ತಾ ಇವೆ. ಅದರಂತೆ ಶ್ರೀ ವ್ಯಾಸರಾಯ ಮಠವು ಕೂಡ ಈ ಕಾರ್ಯವನ್ನು ಮಾಡುವುದು ಅತ್ಯಂತ ಅವಶ್ಯಕ ಎಂಬ ಅಭಿಪ್ರಾಯದಿಂದ , ಶ್ರೀ ವ್ಯಾಸತೀರ್ಥ ವಿದ್ಯಾಪೀಠ ಎಂಬ ಹೆಸರಿನ ವಿದ್ಯಾಪೀಠ ಸ್ಥಾಪನೆ ಆಗಿ ಕೆಲ ವರ್ಷಗಳು ಕಳೆದಿವೆ.ಸುಮಾರು ೪೫ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾ ಇದ್ದಾರೆ.
ವಿದ್ಯಾಪೀಠದ ಮುಖ್ಯ ಉದ್ದೇಶ ಶ್ರೀಮದಾಚಾರ್ಯರ ಸಿದ್ಧಾಂತದ ಆಳವಾದ ಪಾಂಡಿತ್ಯವನ್ನು ಪಡೆಯತಕ್ಕ ವಿದ್ವಾಂಸರ ನಿರ್ಮಾಣ, ಅದರ ಜೊತೆಗೆ ಆ ಶಾಸ್ತ್ರದಲ್ಲಿ ಸರಿಯಾದ ಪಾಂಡಿತ್ಯ ಬರಬೇಕೆಂದರೆ ಅವಶ್ಯಕವಾದ ನ್ಯಾಯಶಾಸ್ತ್ರ, ವ್ಯಾಕರಣ ಶಾಸ್ತ್ರ, ಮೀಮಾಂಸ ಶಾಸ್ತ್ರಗಳ ಪರಿಚಯ ಅವಶ್ಯಕ. ಆ ಕಾರಣದಿಂದ ಆ ಶಾಸ್ತ್ರಗ್ರಂಥಗಳ ಅಧ್ಯಾಪನವನ್ನು ಕೂಡ ಇಲ್ಲಿ ಮಾಡಲಾಗುತ್ತಿದೆ.
ಜೊತೆಗೆ ವೇದಾಧ್ಯನ ಇಲ್ಲದಿದ್ದರೆ ಅಧಿಕಾರ ಪ್ರಾಪ್ತಿಯೇ ಇಲ್ಲ ಎಂಬ ಕಾರಣದಿಂದ ಉಪನೀತ ವಟುಗಳು ವಿದ್ಯಾಪೀಠ ಪ್ರವೇಶ ಮಾಡಿದಾಗ ವೇದಾಧ್ಯಯನ ಆರಂಭಿಸಿ ಅವರಿಗೆ ಕಾಲಕ್ರಮದಲ್ಲಿ ಸಮಸ್ತ ವೇದಪಾಠ (ಸ್ವಶಾ ಖಾ) ವ್ಯವಸ್ಥೆಯನ್ನು ಮಾಡಲಾಗಿದೆ.
ಇದರ ಜೊತೆಗೆ ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅವರ ಅನುಕೂಲತೆ ಒದಗಲಿ ಎಂದು ಪೌರೋಹಿತ್ಯದ ಪರಿಚಯವನ್ನು ಕೂಡ ಅವಶ್ಯಕತೆ ಇದ್ದಷ್ಟು ಮಾಡಿಕೊಡಲಾಗುತ್ತಿದೆ.
ಮುಖ್ಯವಾಗಿ ಶಾಸ್ತ್ರಾಧ್ಯಯನವೇ ಉದ್ದೇಶ, ಅದಕ್ಕಾಗಿ ೪ ಜನ ಪಂಡಿತರು ೨ ವೇದಾಧ್ಯಾಪಕರು ಇವರೆಲ್ಲರ ಪಾಠ ಪ್ರವಚನ ಇಲ್ಲಿ ನಿರಂತರ ನಡಿಯುತ್ತ ಇದೆ, ಇದರ ಜೊತೆಯಲ್ಲಿ ವಿದ್ಯಾರ್ಥಿಗಳು ಲೌಕಿಕ ಪದವಿಗಳನ್ನು ಪಡೆದು, ಲೌಕಿಕವಾಗಿಯೂ ಕೂಡ ಸಾಮಾಜಿಕ ಪ್ರಜ್ಞೆಯನ್ನು ಪಡೆದು ಉತ್ತಮ ನಾಗರೀಕರಾಗಿ ಸಾಮಾಜಿಕ ಜೀವನ ನಡೆಸುವುದು ಅಗತ್ಯ ಎಂಬ ಕಾರಣದಿಂದ ಅವರಿಗೆ ಸೂಕ್ತ ಲೌಕಿಕ ಪರೀಕ್ಷೆಯಲ್ಲಿ ತೇರ್ಗಡೆ ಆಗಲು ಅಧ್ಯಾಪಕರ ವ್ಯವಸ್ಥೆ ಮಾಡಲಾಗಿದೆ.
ಒಟ್ಟಿನಲ್ಲಿ ಒಂದು ಪರಿಪೂರ್ಣ ವಾದ ಶಾಸ್ತ್ರಧ್ಯಾನದ ಪದ್ಧತಿ ಈ ಗುರುಕುಲದಲ್ಲಿ ನಡಿಯುತ್ತ ಇದೆ, ಇದನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಬೆಳಸತಕ್ಕ ವಿಶ್ವಾಸ ನಮಗೆ ಇದೆ. ಶ್ರೀ ವ್ಯಾಸರಾಯರ ಅನುಗ್ರಹದಿಂದ ಅವರು ರಚನೆ ಮಾಡಿರತಕ್ಕ ವ್ಯಾಸ ತ್ರಯ – ನ್ಯಾಯಾಮೃತ, ಚಂದ್ರಿಕಾ, ತರ್ಕತಾಂಡವ ಗ್ರಂಥಗಳನ್ನು ಅಧ್ಯಯನ ಮಾಡಿ ಪಾಠ ಹೇಳತಕ್ಕ, ವಾಕ್ಯಾರ್ಥ ಸಭೆಗಳಲ್ಲಿ ವಿಚಾರ ಮಾಡತಕ್ಕಂತ ಉತ್ತಮ ವಿದ್ವಾಂಸರು ನಿರ್ಮಾಣ ಆಗಲೆಂದು ಈ ವಿದ್ಯಾಪೀಠ ಮೈಸೂರಿನಲ್ಲಿ ಸ್ಥಾಪಿಸಿ ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ ಎಲ್ಲ ರೀತಿಯ ಸೌಕರ್ಯಗಳನ್ನು ಉಚಿತವಾಗಿ ನೀಡಡಲಾಗಿದೆ.
ಈ ಕಾರ್ಯವು ಸಾರ್ವಜನಿಕರ ಮತ್ತು ವ್ಯಾಸರಾಯರ ಭಕ್ತರ ಸಹಕಾರದಿಂದ ನಡಿಯುತ್ತಿದೆ, ತಮ್ಮೆಲ್ಲರ ಸಹಕಾರ ಈ ಕಾರ್ಯಕ್ಕೆ ಬೇಕೆಂದ್ದು ನಾನು ತಿಳಿಸುತ್ತಿದ್ದೀನಿ.