Article on ವಿಶ್ವೇಶ ತೀರ್ಥರು by Gurumaahatmya
ತಸ್ಮೈ ಶ್ರೀಗುರವೆ ನಮ: ಸರ್ವಜ್ಞನಾದ ಪರಿಪೂರ್ಣನಾದ ಪರಬ್ರಹ್ಮನನ್ನು ತಿಳಿದು ತಿಳಿಸಬಲ್ಲ ಒಬ್ಬ ನಿಸ್ವಾರ್ಥ ವ್ಯಕ್ತಿಯೇ ’ಗುರು’. ತಾಯಿ ಇಲ್ಲದೆ ಮಗುವಿನ ಕಲ್ಪನೆಯು ಹೇಗೆ ಅಸಾದ್ಯವೋ ಹಾಗೆ ಗುರುಗಳಿಲ್ಲದೆ ನಮಗೆ ವಿದ್ಯೆಯು ಅಸಾಧ್ಯ, ಅಷ್ಟುಮಾತ್ರವಲ್ಲದೆ ಗುರುಗಳು ಸಂಸಾರವೆಂಬ ಸಮುದ್ರದಲ್ಲಿ ದಾರಿತಪ್ಪದಂತೆ ನಡೆಸಬಲ್ಲ ನಾವಿಕ, ಅಂತಹವರಿಗೆ ನಾವು ಬಾಗಬೆಕು, ಬಾಗಿ ಬಳಿಗೆ ಸಾಗಬೆಕು ಆಗಲೇ ಅವರು ನಮ್ಮನ್ನು ದಡಕ್ಕೆ ಸಾಗಿಸುತ್ತಾರೆ. “ಗೃಣಾತಿ ಇತಿ ಗುರು:” ಅಂದರೆ ಉಪದೇಶವಾಡುವವನು ಎಂದರ್ಥ. ಜ್ಞನೋಪದೆಶಕರಾದ ಗುರುಗಳಿಗೆ ಜಗತ್ತಿನ ಯಾವ ವಸ್ತುವಿನ ಉಪಮೆಯನ್ನು ಕೊಡುವುದಕ್ಕಾಗುವುದಿಲ್ಲ. ಹಾಗೆ …